TESS-India School Leadership Video Resources

ನಿಮ್ಮ ಶಾಲೆಯ ಬಗ್ಗೆ ಅರಿಯುವುದು

ಶಾಲಾ ನಾಯಕರೊಬ್ಬ್ಬರು ತಮ್ಮ ಶಾಲೆಯ ಸುತ್ತ ಓಡಾಡುತ್ತಾರೆ. ತರಗತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಪರಿಣಾಮಕಾರಿ ಪದ್ದತಿಗಳನ್ನು ಪ್ರಶಂಸಿಸಲು ಮತ್ತು ಏನಾದರು ಕೊರತೆ ಕಂಡು ಬಂದಲ್ಲಿ ಅದನ್ನು ಸರಿಪಡಿಸಲು ನೆರವಾಗುವಂತೆ, ನಾಯಕರು ತರಗತಿಗಳನ್ನು ಗಮನಿಸಿ ಟಿಪ್ಪಣ್ಣಿಗಳನ್ನು ಮಾಡಿಕೊಳ್ಳುತ್ತಾರೆ. ನಾಯಕರ ಈ ಭೇಟಿ ಅಭ್ಯಾಸವಾಗಿ ಹೋಗುವುದರಿಂದ, ವಿದ್ಯಾರ್ಥಿಗಳು ಹಾಗು ಶಿಕ್ಷಕರು ಭೇಟಿಗೆ ಪ್ರತಿಕ್ರಿಯಿಸುವುದಿಲ್ಲ.

ನಿಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ನೀವು ನಿಮ್ಮನ್ನುಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ನಿಯಮಿತವಾಗಿ ನೀವು ಶಾಲೆಯ ಸುತ್ತ ಒಮ್ಮೆ ಹೋಗಿ ಬರಲು ಸ್ವಲ್ಪ ಸಮ್ಮಯ ತೆಗೆದುಕೊಂಡರೆ, ಶಾಲೆಯಲ್ಲಿ ಕೆಲಸ ನಡೆಯುವುದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. ಪಾಠಗಳು ನಡೆಯುವಾಗ, ವಿದ್ಯಾರ್ಥಿಗಳ ಮುಂದೆ ಕುಳಿತು ಅವರ ಅನುಭವವನ್ನು ಎಷ್ಟು ಬ್ಬಾರಿ ನೀವು ಕೇಳುತ್ತೀರಾ? ನಿಮ್ಮ ಶಾಲೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಸಮಗ್ರ ಮಾಹಿತಿಯ ಬಗ್ಗೆ ಪುರಾವೆಯನ್ನು ಇನ್ನು ಹೇಗೆ ಸಂಗ್ರಹಿಸುತ್ತೀರಾ?

ಸಂಬಂಧಿತ TESS-India ಶಾಲೆಯ ನಾಯಕತ್ವ OER