Skip to main content
Printable page generated Thursday, 25 April 2024, 9:08 PM
Use 'Print preview' to check the number of pages and printer settings.
Print functionality varies between browsers.
Unless otherwise stated, copyright © 2024 The Open University, all rights reserved.
Printable page generated Thursday, 25 April 2024, 9:08 PM

TESS-India ವಿಡಿಯೋ ಸಂಪನ್ಮೂಲಗಳು

Introduction

TESS-India ವಿಡಿಯೋ ಸಂಪನ್ಮೂಲಗಳಿಗೆ ಸ್ವಾಗತ. ಈ ವಿಡಿಯೋಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿ (OER) ಉಚಿತವಾಗಿ ಲಭ್ಯವಿದ್ದು, ಕ್ರಿಯೇಟಿವ್ ಆಟ್ರಿಬ್ಯೂಷನ್ ಶೇರ್ ಅಲೈಕ್ ಲೈಸೆನ್ಸ್ ಅಡಿಯಲ್ಲಿ ಪ್ರಕಟಗೊಂಡಿವೆ. ಶಿಕ್ಷಕರು ಮತ್ತು ಶಾಲಾ ನಾಯಕರಿಗಾಗಿ ಇರುವ TESS-India ಪಠ್ಯ ಪುಸ್ತಕ ಆಧಾರಿತ OER ಗೆ ಪೂರಕವಾಗಿರುವ ಉದ್ದೇಶ ಹೊಂದಿದೆ.

TESS-India ವಿಡಿಯೋಗಳು ಭಾರತದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಚಿತ್ರೀಕರಣಗೊಂಡಿವೆ. ತಮ್ಮ ವಿದ್ಯಾರ್ಥಿಗಳೊಡನೆ ಕಲಿಕೆ ಅಧಾರಿತ ಹಾಗೂ ಹೆಚ್ಚು ಭಾಗವಹಿಸುವಿಕೆಯ ಒಂದು ನಿಲುವನ್ನು ಶಿಕ್ಷಕರು ಅಳವಡಿಸಿಕೊಂಡಿರುವುದನ್ನು ಈ ವಿಡಿಯೋಗಳು ತೋರಿಸುತ್ತವೆ. ಒಂದು ಮಾದರಿ ಪದ್ದತಿಯನ್ನು ಪ್ರದರ್ಶಿಸುವ ಯಾವ ಉದ್ದೇಶವನ್ನೂ ಈ ವಿಡಿಯೋಗಳು ಹೊಂದಿಲ್ಲ. ನಿಮ್ಮ ನಿಮ್ಮ ತರಗತಿಗಳಲ್ಲಿ, ಇಂತಹುದೇ ನಿಲುವುಗಳು ಹಾಗೂ ತಂತ್ರಗಳನ್ನು ಬಳಸಿಕೊಂಡು ಪ್ರಯೋಗ ನಡೆಸಲು ನಿಮ್ಮನ್ನು ಪ್ರೇರಿಪಿಸುವ ಗುರಿಯನ್ನು ವಿಡಿಯೋಗಳು ಹೊಂದಿವೆ.

TESS-India ದ ಬೋಧನಾ ಶಾಸ್ತ್ರದಡಿಯಲ್ಲಿನ ಹತ್ತು ಮುಖ್ಯ ಸಂಪನ್ಮೂಲಗಳ ಸಿದ್ಧಾಂತಗಳ ಪ್ರಕಾರ ಈ ವಿಡಿಯೋಗಳನ್ನು ವಿನ್ಯಾಸಿಸಲಾಗಿದೆ.

ವಿಡಿಯೋಗಳ ಸಂಪೂರ್ಣ ಪಟ್ಟಿ ಪಿಡಿಎಫ್ ಸಾರಾಂಶದಲ್ಲಿ ಲಭ್ಯವಿದೆ.

ಇನ್ನೂ ಒಂದು ಸೆಟ್ ವಿಡಿಯೋಗಳು TESS-India ಶಾಲಾ ನಾಯಕತ್ವ OER ಗೆ ಪೂರಕವಾಗಿದೆ.

Video Resources acknowledgements

ಪಾಠಗಳನ್ನು ಯೋಜಿಸುವುದು

ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಕಲಿಯಲು, ಅವರಿಗೆ ಈಗಾಗಲೇ ತಿಳಿದಿರುವ ಅಂಶಗಳ ಮೇಲೆ ಶಿಕ್ಷಕರು ತಮ್ಮ ಚಟುವಟಿಕೆಗಳನ್ನು ಯೋಜಿಸಬೇಕು. ಕೆಳಗಿನ ಇಮೇಜ್ ಮೇಲೆ ಕ್ಲಿಕ್ ಮಾಡಿದರೆ, ಈ ವಿಡಿಯೋಗಳನ್ನು ನೀವು ನೋಡಬಹುದು. ಇಲ್ಲಿ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚು ಮುಂದುವರೆಸಲು, ತಾವು ತಮ್ಮ ಪಾಠ ಯೋಜನೆಯಲ್ಲಿ ಯಾವ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಗೆ ನಿರ್ಧರಿಸಿದರೆಂಬುದರ ಬಗ್ಗೆ ವಿವರಣೆ ನೀಡುತ್ತಾರೆ.

ಮುಖ್ಯ ಸಂಪನ್ಮೂಲ ’ ಪಾಠಗಳನ್ನು ಯೋಜಿಸುವುದು’ ನೀವು ಓದಬಹುದು.

ಒಂದು ಕಥೆಯನ್ನು ವಿದ್ಯಾರ್ಥಿಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ, ಒಬ್ಬ ಶಿಕ್ಷಕರು , ಕಥೆ ಹೇಳುವ ಮೊದಲು, ಪ್ರಶ್ನೆಗಳು ಮತ್ತು ಚಿತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.

Interactive feature not available in single page view (see it in standard view).

ವಿದ್ಯಾರ್ಥಿಗಳು ಇಂಗ್ಲಿಷಿನ ಅಕ್ಷರಗಳು ಮತ್ತು ಶಬ್ದಗಳನ್ನು ಅಭ್ಯಾಸ ಮಾಡಲು ನೆರವಾಗುವಂತೆ ಸಂಪನ್ಮೂಲಗಳನ್ನು ರಚಿಸುವುದು ಶಿಕ್ಷಕರ ಯೋಜನೆಯ ಒಂದು ಭಾಗವಾಗಿರುತ್ತದೆ.

Interactive feature not available in single page view (see it in standard view).

ತಮ್ಮ ವಿದ್ಯಾರ್ಥಿಗಳಿಗೆ ಭೌತವಸ್ತುವಿನ ವಿವಿಧ ಸ್ಥಿತಿಗಳನ್ನು ತೋರಿಸಲು ತಾವು ಹೇಗೆ ಒಂದು ಪ್ರಾತ್ಯಕ್ಷಿಕೆಯನ್ನು ಯೋಜಿಸಿದರು ಎಂದು ಒಬ್ಬ ಶಿಕ್ಷಕಿ ವಿವರಿಸುತ್ತಾರೆ.

Interactive feature not available in single page view (see it in standard view).

ಎಲ್ಲರನ್ನೂ ತೊಡಗಿಸಿಕೊಳ್ಳುವುದು

ತರಗತಿಯ ಚಟುವಟಿಕೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಅವಕಾಶ ದೊರಕುವುದನ್ನು ಖಾತರಿಪಡಿಸಿಕೊಳ್ಳಲು, ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಪರಿಚಯ ಚೆನ್ನಾಗಿ ಇರಬೇಕು. ತಮ್ಮ ವಿದ್ಯಾರ್ಥಿಗಳಿಗೆ ಏನು ತಿಳಿದಿದೆ ಹಾಗೂ ಹೇಗೆ ತಿಳಿದಿದೆ ಎಂದು ಅರಿಯಲು ಶಿಕ್ಷಕರು ಕಲಿಕೆದಾರರಾಗಬೇಕಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೂ ಕಲಿಕೆಯ ಅವಕಾಶಗಳು ಲಭ್ಯವಾಗುವಂತೆ ಶಿಕ್ಷಕರು ತಮ್ಮ ಪಾಠಗಳನ್ನು ಈ ವಿಡಿಯೋಗಳಲ್ಲಿ ಆಯೋಜಿಸಿದ್ದಾರೆ. ಗುಂಪು ಹಾಗೂ ಜೋಡಿಯಾಗಿ ಮಾಡುವ ಚಟುವಟಿಕೆಗಳು , ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಗಮನಿಸಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತವೆ.

‘ಎಲ್ಲರನ್ನೂ ತೊಡಗಿಸಿಕೊಳ್ಳುವುದು’ ಮುಖ್ಯ ಸಂಪನ್ಮೂಲವನ್ನು ನೀವು ಓದಬಹುದು.

ಅವರವರ ಮಾತೃ ಭಾಷೆಯಲ್ಲೇ ತಮ್ಮ ಸಣ್ಣ ವಯಸ್ಸಿನ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸುತ್ತಾರೆ.

Interactive feature not available in single page view (see it in standard view).

ಒಂದು ಬಹು ಶ್ರೇಣಿಯ, ಬಹು ಭಾಷೆಯ ಸಂದರ್ಭದಲ್ಲಿ ಒಬ್ಬ ಶಿಕ್ಷಕ ಒಂದು ಉದ್ದೇಶಪೂರ್ವಕ ಚಟುವಟಿಕೆಯಲ್ಲಿ ಎಲ್ಲ ವಿದ್ಯಾರ್ಥಿಗಳನ್ನು ಬಹಳ ನಿಪುಣತೆಯಿಂದ ತೊಡಗಿಸಿಕೊಳ್ಳುತ್ತಾರೆ.

Interactive feature not available in single page view (see it in standard view).

ತಮ್ಮ ಮಾತೃ ಭಾಷೆಯಲ್ಲಿರುವ ಜನಪದ ಹಾಡುಗಳನ್ನು ಶಾಲೆಯ ಭಾಷೆಗೆ ಭಾಷಾಂತರಿಸಲು ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತದೆ.

Interactive feature not available in single page view (see it in standard view).

ಪಾಠದಲ್ಲಿ ಎಲ್ಲರೂ ಭಾಗವಹಿಸಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಜೋಡಿಯಾಗಿ ಮಾಡುವ ಚಟುವಟಿಕೆಯನ್ನು ನೀಡುತ್ತಾರೆ.

Interactive feature not available in single page view (see it in standard view).

ಪಾಠದಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸುವುದನ್ನು ಖಾತ್ರಿಪಡಿಸಿಕೊಳ್ಳಲು ತಮ್ಮ ದೊಡ್ಡ ತರಗತಿಯನ್ನು ಶಿಕ್ಷಕಿ ಸೂಕ್ತವಾಗಿ ಆಯೋಜಿಸುತ್ತಾರೆ.

Interactive feature not available in single page view (see it in standard view).

ಕಲಿಕೆಗಾಗಿ ಮಾತು

ಕಲಿಕೆಯನ್ನು ಪೂರಕವಾಗಿಸಲು ಹಾಗು ಬೆಂಬಿಸಲು, ವಿದ್ಯಾರ್ಥಿಗಳು ಪರಸ್ಪರ ಮಾತಾಡಲು ಹಾಗು ಶಿಕ್ಷಕರೊಡನೆ ಮಾತನಾಡಲು ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯ. ಮಾತನಾಡುವ ಮೂಲಕ ವಿದ್ಯಾರ್ಥಿಗಳು ತಾವು ತಿಳಿದು ಅರ್ಥಮಾಡಿಕೊಂಡಿರುವುದನ್ನು ಹಂಚಿಕೊಳ್ಳುತ್ತಾರೆ ಹಾಗು ಅದನ್ನು ತಾವು ಹೊಸದಾಗಿ ಕಲಿತಿರುವುದಕ್ಕೆ ತಾಳೆ ಹಾಕುತ್ತಾರೆ. ತರಗತಿಯಲ್ಲಿ ಫಲದಾಯಕವಾದ ಮಾತುಕತೆಯಲ್ಲಿ ತಮ್ಮನು ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಹೇಗೆ ಅವಕಾಶಗಳನ್ನು ಮಾಡಿಕೊಡಬಹುದೆಂದು ಈ ವಿಡೀಯೊಗಳು ತೋರಿಸುತ್ತವೆ.

ಮುಖ್ಯ ಸಂಪನ್ಮೂಲ ’ಕಲಿಕೆಗಾಗಿ ಮಾತು’ ಅನ್ನು ನೀವು ಓದಬಹುದು.

ತರಗತಿಯಲ್ಲಿ ವಿದ್ಯಾರ್ಥಿಗಳು ಮಾತನಾಡುವುದನ್ನು ಉತ್ತೇಜಿಸಲು ಒಬ್ಬ ಶಿಕ್ಷಕಿ ಆಟಗಳನ್ನು ಅಳವಡಿಸಿಕೊಳ್ಳುತ್ತಾರೆ.

Interactive feature not available in single page view (see it in standard view).

ಚಟುವಟಿಕೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗವಹಿಸುವುದನ್ನು ಖಾತ್ರಿಪಡಿಸಿಕೊಳ್ಳಲು ಶಿಕ್ಷಕರು ಪಾಠದ ವಿಷಯವನ್ನು ಜಾಗರೂಕತೆಯಿಂದ ಆಯ್ಕೆ ಮಾಡಿಕೊಳ್ಳುತ್ತಾರೆ.

Interactive feature not available in single page view (see it in standard view).

ಒಟ್ಟಾಗಿ ಸಮಸ್ಯೆಯನ್ನು ರಚಿಸಲು ಹಾಗು ಪರಿಹರಿಸುವುದನ್ನು ಉತ್ತೇಜಿಸಲು ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಜೋಡಿಗಳನ್ನಾಗಿ ಆಯೋಜಿಸುತ್ತಾರೆ

Interactive feature not available in single page view (see it in standard view).

ಬರೆಯುವ ಒಂದು ಕಾರ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧ ಪಡಿಸಲು ಶಿಕ್ಷಕರೊಬ್ಬರು ಚರ್ಚೆ ಆಧಾರಿತ ಚಟುವಟಿಕೆಯನ್ನು ಬಳಾಸುತ್ತಾರೆ.

Interactive feature not available in single page view (see it in standard view).

ಆಲೋಚನೆಗಳನ್ನು ಅವಿಷ್ಕಾರಗೊಳಿಸಲು, ತಮ್ಮ ತಾರ್ಕಿಕ ಪ್ರತಿಪಾದನೆಯನ್ನು ಬೆಳೆಸಿಕೊಳ್ಳಲು ಮತ್ತು ಪರಸ್ಪರರಿಂದ ಕಲಿಯಲು ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಕರು ಅವಕಾಶ ನೀಡುತ್ತಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ಮಾಧ್ಯಮಿಕ ಗಣಿತ ಅನ್ನು ನೀವು ಓದಬಹುದು.

ತರಗತಿಯಲ್ಲಿ ಫಲದಾಯಕವಾದ ಮಾತುಕತೆ ನಡೆಯುವುದನ್ನು ಉತ್ತೇಜಿಸಲು ಸಮಮಟ್ಟದ ಸಾಧನೆಯ ಗುಂಪುಗಳನ್ನಾಗಿ ವಿದ್ಯಾರ್ಥಿಗಳನ್ನು ಶಿಕ್ಷಕರು ಆಯೋಜಿಸುತ್ತಾರೆ

Interactive feature not available in single page view (see it in standard view).

ಜಂಟಿ ಕಾರ್ಯದ ಬಳಕೆ

ಜೋಡಿಗಳಾಗಿ ಕೆಲಸ ಮಾಡುವುದರಿಂದ , ವಿದ್ಯಾರ್ಥಿಗಳಿಗೆ ತಾವು ಅರ್ಥಮಾಡಿಕೊಂಡಿದ್ದನ್ನು ಹಂಚಿಕೊಳ್ಳಲು ಹಾಗು ಪರಸ್ಪರರೊಡನೆ ಹೇಳಿಕೊಳ್ಳಲು ನೆರವಾಗುತ್ತದೆ. ಎಲ್ಲ ವಯಸ್ಸಿನ ವಿದ್ಯಾರ್ಥಿಗಳೊಡನೆ ಮತ್ತು ಎಲ್ಲ ವಿಷಯಗಳಲ್ಲೂ ಅವರ ಕಲಿಕೆಯನ್ನು ಬೆಂಬಲಿಸಲು ಜೋಡಿಗಳಾಗಿ ಕೆಲಸ ಮಾಡುವುದನ್ನು ಸಮರ್ಪಕವಾಗಿ ಹೇಗೆ ಬಳಸಿಕೊಳ್ಳಬಹುದೆಂದು ಈ ವಿಡೀಯೊಗಳು ತೋರಿಸುತ್ತದೆ.

ಮುಖ್ಯ ಸಂಪನ್ಮೂಲ ’ಜಂಟಿ ಕಾರ್ಯದ ಬಳಕೆ’ ಅನ್ನು ನೀವು ಓದಬಹುದು.

ಹೊಸ ಭಾಷೆಯನ್ನು ಪರಿಚಯಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಜೋಡಿಯಾಗಿ ಕೆಲಸ ಮಾಡಲು ಶಿಕ್ಷಕರು ಹೇಳುತ್ತಾರೆ.

Interactive feature not available in single page view (see it in standard view).

ಸಂಖ್ಯ ಸಮಸ್ಯೆಗಳನ್ನು ರಚಿಸಲು ವಿದ್ಯಾರ್ಥಿಗಳನ್ನು ಜೋಡಿಗಳನ್ನಾಗಿ ಶಿಕ್ಷಕರು ಆಯೋಜಿಸುತ್ತಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ಪ್ರಾಥಮಿಕ ಗಣಿತ ಅನ್ನು ನೀವು ಓದಬಹುದು.

ವೈಯಕ್ತಿಕ ಬರೆಯುವ ಚಟುವಟಿಕೆಕೆಗಾಗಿ ತಮ್ಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಶಿಕ್ಷಕಿಯೊಬ್ಬರು ಜೋಡಿಯಾಗಿ ಮಾತನಾಡುವುದನ್ನು ಆಯೋಜಿಸುತ್ತಾರೆ.

Interactive feature not available in single page view (see it in standard view).

ಜೋಡಿಯಾಗಿ ಕೆಲಸ ಮಾಡುವ ಚಟುವಟಿಕೆಯೊಂದರಲ್ಲಿ ವಿದ್ಯಾರ್ಥಿಗಳು ವಿವಿಧ ಪಾತ್ರಗಳನ್ನು ವಹಿಸಿಕೊಳ್ಳುತ್ತಾರೆ.

Interactive feature not available in single page view (see it in standard view).

ವಿದ್ಯಾರ್ಥಿಗಳಲ್ಲಿ ವಿಜ್ನಾನದ ಒಂದು ಪರಿಕಲ್ಪನೆಯನ್ನು ಬೆಳೆಸಲು ಶಿಕ್ಷಕರೊಬ್ಬರು ಜೋಡಿಯಾಗಿ ಮಾತನಾಡುವ ಚಟುವಟಿಕೆಯನ್ನು ಬಳಸಿಕೊಳ್ಳುತ್ತಾರೆ.

Interactive feature not available in single page view (see it in standard view).

ಯೋಚಿಸುವಿಕೆಯನ್ನು ಉತ್ತೇಜಿಸಲು ಪ್ರಶ್ನಿಸುವಿಕೆಯನ್ನು ಬಳಸುವುದು

ಉತ್ತಮ ಪ್ರಶ್ನೆಗಳನ್ನು ಕೇಳುವುದು ಶಿಕ್ಷಕರಿಗೆ ಒಂದು ಮುಖ್ಯ ಕೌಶಲ. ಉತ್ತಮ ಪ್ರಶ್ನೆಗಳು ವಿದ್ಯಾರ್ಥಿಗಳ ಆಲೋಚನೆಗಳಿಗೆ ಚಾಲನೆ ನೀಡಬಹುದು. ವಿದ್ಯಾರ್ಥಿಗಳಿಗೆ ಏನು ಗೊತ್ತೆಂದು ತಿಳಿದುಕೊಳ್ಳಲು ಸಹ ಪ್ರಶ್ನೆಗಳು ನೆರವಾಗುತ್ತದೆ. ತಮ್ಮ ವಿದ್ಯಾರ್ಥಿಗಳ ಆಲೋಚನೆಗಳನ್ನು ವಿಸ್ತರಿಸಲು ವಿದ್ಯಾರ್ಥಿಗಳನ್ನು ವಿವಿಧ ರೀತಿಯ ಪ್ರಶ್ನೆಗಳನು ಶಿಕ್ಷಕರು ಕೇಳುವುದನ್ನು ವಿಡೀಯೊದಲ್ಲಿ ಕಾಣಬಹುದು. ಅವರು ವಿದ್ಯಾರ್ಥಿಗಳ ಉತ್ತರಗಳನ್ನೂ ಸಹ ಗಮನವಿಟ್ಟು ಆಲಿಸುತ್ತಾರೆ.

ಮುಖ್ಯ ಸಂಪನ್ಮೂಲ ’ಯೋಚಿಸುವಿಕೆಯನ್ನು ಉತ್ತೇಜಿಸಲು ಪ್ರಶ್ನಿಸುವಿಕೆಯನ್ನು ಬಳಸುವುದು’ ಅನ್ನು ನೀವು ಓದಬಹುದು.

ತರಗತಿಯಲ್ಲಿ ಪ್ರಶ್ನೆಯನ್ನು ಕೇಳುವುದು ಹಾಗು ಉತ್ತರಿಸುವ ಕಲೆಯನ್ನು ತಮ್ಮಲ್ಲಿ ಹಾಗು ತಮ್ಮ ವಿದ್ಯಾರ್ಥಿಗಳಲ್ಲಿ ಹೇಗೆ ಬೆಳೆಸುತ್ತದ್ದಾರೆಂಬುದರ ಬಗ್ಗೆ ಒಬ್ಬ ಶಿಕ್ಷಕರು ಮಾತನಾಡುತ್ತರೆ.

Interactive feature not available in single page view (see it in standard view).

ರೇಖಾ ಶಾಸ್ತ್ರದ ತರಗತಿಯಲ್ಲಿ ಪ್ರಶ್ನೆ

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ದಿ OER ಮಾಧ್ಯಮಿಕ ಗಣಿತ ಅನ್ನು ನೀವು ಓದಬಹುದು

ಪರಿವೀಕ್ಷಣೆ ಮತ್ತು ಹಿಮ್ಮಾಹಿತಿ ನೀಡುವಿಕೆ

ವಿದ್ಯಾರ್ಥಿಗಳ ಕಲಿಕೆಯನ್ನು ಶಿಕ್ಷಕರು ಹೇಗೆ ಗಮನಿಸುತ್ತಾರೆ ಮತ್ತು ಅವರಿಗೆ ಹೇಗೆ ಮಾರ್ಗದರ್ಶನ ನೀಡುತ್ತಾರೆ ಎಂಬುದನ್ನು ವಿಡೀಯೊದಲ್ಲಿ ನಿರೂಪಿಸಲಾಗಿದೆ. ಆಲೋಚನೆಯನ್ನು ಪ್ರೋತ್ಸಾಹಿಸಲು ಪ್ರಶ್ನೆ ಕೇಳುವ ಮುನ್ನ, ವಿದ್ಯಾರ್ಥಿಗಳ ಮಾತನ್ನು ಶಿಕ್ಷಕರು ಗಮನವಿಟ್ಟು ಕೇಳುತ್ತಾರೆ ಹಾಗು ಅದರಿಂದ ಅವರುಗಳು ಏನು ಅರ್ಥಮಾಡಿಕೊಳ್ಳುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ.

ಮುಖ್ಯ ಸಂಪನ್ಮೂಲ ’ಪರಿವೀಕ್ಷಣೆ ಮತ್ತು ಹಿಮ್ಮಾಹಿತಿ ನೀಡುವಿಕೆ’ ಅನ್ನು ನೀವು ಓದಬಹುದು.

ಬಹು ಶ್ರೇಣಿಯ ಬಹು ಭಾಷೆಯ ಸಂದರ್ಭದಲ್ಲಿ ಪರಿಣಾಮಕಾರಿಯಾದ ಫೀಡ್ ಬ್ಯಾಕ್ ತಂತ್ರಗಳ ಬಳಕೆಯ ಬಗ್ಗೆ ಶಿಕ್ಷಕರೊಬ್ಬರು ನಿರೂಪಿಸುತ್ತಾರೆ.

Interactive feature not available in single page view (see it in standard view).

ತಮ್ಮ ಮಕ್ಕಳ ಕಲಿಕೆಯನ್ನು ಪರಿಶೀಲಿಸಲು ಒಂದು ಪ್ರಾಥಮಿಕ ಶಾಲೆಯಲ್ಲಿ ಪೊಷಕರನ್ನು ಆಹ್ವಾನಿಸಲಾಗುತ್ತದೆ. ಮನೆಯಲ್ಲಿ ಮಕ್ಕಳ ಕಲಿಕೆಯನ್ನು ಹೇಗೆ ಮೇಲ್ವಿಚಾರಣೆ ಮಾಡಬಹುದೆಂದು ಪೋಷಕರಿಗೆ ತಿಳಿಸಲು ಶಿಕ್ಷಕರು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ.

Interactive feature not available in single page view (see it in standard view).

ತಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಮುನ್ನಡೆಸಲು ಶಿಕ್ಷಕಿಯೊಬ್ಬರು ಪಾಠ ಮಾಡುವ ಇಡೀ ಸಮಯದಲ್ಲಿ ಪರಿವೀಕ್ಷಣೆ ಮತ್ತು ಫೀಡ್ ಬ್ಯಾಕ್ ತಂತ್ರಗಳನ್ನು ಬಳಾಸುತ್ತಾರೆ.

Interactive feature not available in single page view (see it in standard view).

ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ಗುಂಪುಗಳಲ್ಲಿ ಕೆಲಸ ಮಾಡುವಾಗ ಅವರತ್ತ ಗಮನ ಹರಿಸಿ ಅವರ ಮಾತುಗಳನ್ನು ಆಲಿಸಿ, ನಂತರ ಶಿಕ್ಷಕರು ಅವರುಗಳ ಕಲಿಕೆಯನ್ನು ಮುನ್ನಡೆಸಲು ಮಾರ್ಗದರ್ಶನವಾಗಿ ಫೀಡ್ ಬ್ಯಾಕ್ ನೀಡುತ್ತಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ಮಾಧ್ಯಮಿಕ ಗಣಿತ ಅನ್ನು ನೀವು ಓದಬಹುದು

ಗುಂಪುಕಾರ್ಯದ ಬಳಕೆ

ಗುಂಪುಗಳಲ್ಲಿ ಕೆಲಸ ಮಾಡಲು ವಿದ್ಯಾರ್ಥಿಗಳನ್ನು ಆಯೋಜಿಸಿದಾಗ, ಅವರಿಗೆ ಪರಸ್ಪರರ ಆಲೋಚನೆಗಳನ್ನು ಅರಿತು ತಮ್ಮ ತಿಳುವಳಿಕೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ.

ಮುಖ್ಯ ಸಂಪನ್ಮೂಲ ’ಗುಂಪುಕಾರ್ಯದ ಬಳಕೆ’ ಅನ್ನು ನೀವು ಓದಬಹುದು.

ಬಹು ಶ್ರೇಣಿಯ ಬಹು ಭಾಷೆಯ ಸಂದರ್ಭದಲ್ಲಿ ಶಿಕ್ಷಕರು ಗುಂಪು ಕೆಲಸ ಆಧಾರಿತ ಚಟುವಟಿಕೆಯನ್ನು ನಿರ್ವಹಿಸುತ್ತಾರೆ.

Interactive feature not available in single page view (see it in standard view).

ಶಿಕ್ಷಕರು ಚರ್ಚೆ ಆಧಾರಿತ ಚಟುವಟಿಕೆಯನ್ನು ಗುಂಪು ಕೆಲಸ ಬಳಸಿ ನಡೆಸುತ್ತಾರೆ

Interactive feature not available in single page view (see it in standard view).

ಶಿಕ್ಷಕರು ತಮ್ಮ್ಮ ವಿದ್ಯಾರ್ಥಿಗಳು ನಾಲ್ಕ್ಕು ಗುಂಪುಗಳನ್ನಾಗಿ ವಿಂಗಡಿಸುತ್ತಾರೆ. ಚಟುವಟಿಕೆಯ ವಿವಿಧ ಅಂಶಗಳ ಹೊಣೆಯನ್ನು ಯಾರು ಯಾರು ತೆಗೆದುಕೊಳ್ಳುತ್ತಾರೆಂದು ಗುಂಪಿನ ಸದಸ್ಯರು ನಿರ್ಧರಿಸುತ್ತಾರೆ.

Interactive feature not available in single page view (see it in standard view).

ಗುಂಪ ಆಧಾರಿತ ಚರ್ಚೆಗೆ ತಮ್ಮ ವಿದ್ಯಾರ್ಥಿಗಳನ್ನ್ನು ಶಿಕ್ಷಕರು ಸಿದ್ದ ಪಡಿಸುತ್ತಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ’ ಮಾಧ್ಯಮಿಕ ಗಣಿತ’ ಅನ್ನು ನೀವು ಓದಬಹುದು.

ಪ್ರಗತಿ ಮತ್ತು ಕಾರ್ಯನಿರ್ವಹಣೆಯ ಮೌಲ್ಯಮಾಪನ

ವಿದ್ಯಾರ್ಥಿಗಳ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದರಿಂದ , ತಮ್ಮ ಪ್ರತಿಯೊಬ್ಬ ವಿದ್ಯಾರ್ಥಿಗೂ ಮುಂದಿನ ಕಲಿಕೆಯ ಅವಕಾಶವನು ಯೋಜಿಸಲು ಶಿಕ್ಷಕರಿಗೆ ಇದು ನೆರವಾಗುತ್ತದೆ. ತರಗತಿಯಲ್ಲಿ, ದೊಡ್ಡ ತರಗತಿಯಲ್ಲೂ ಸಹ ಮೌಲ್ಯಮಾಪನವನ್ನು ನಡೆಸುವ ವಿವಿಧ ರೀತಿಗಳನ್ನು ತೋರಿಸಿದ್ದಾರೆ.

ಮುಖ್ಯ ಸಂಪನ್ಮೂಲ ’ ಪ್ರಗತಿ ಮತ್ತು ಕಾರ್ಯನಿರ್ವಹಣೆಯ ಮೌಲ್ಯಮಾಪನ’ ಅನ್ನು ನೀವು ಓದಬಹುದು.

ಬಹುಶ್ರೇಣಿಯ ಬಹು ಭಾಷೆಯ ಸಂದರ್ಭದಲ್ಲಿ ಶಿಕ್ಷಕರು ಮೌಲ್ಯಮಾಪನದ ಹಲವಾರು ವಿಧಗಳಲ್ಲು ಬಳಸಿಕೊಳ್ಳುತ್ತಾರೆ.

Interactive feature not available in single page view (see it in standard view).

ತಮ್ಮ ಮುಂದಿನ ಪಾಠ ಯೋಜನೆಯ ಬಗ್ಗೆ ತಿಳಿಸಲು , ತಮ್ಮ ವಿದ್ಯಾರ್ಥಿಗಳ ಪ್ರಗತಿಯನ್ನು ಪಾಠ ಮಾಡುವಾಗ ಹೇಗೆ ಮೌಲ್ಯಮಾಪನ ಮಾಡುತ್ತಾರೆಂಬುದರ ಬಗ್ಗೆ ಪಾಠವನ್ನು ಹೇಗೆ ಯೋಜಿಸುತ್ತಾರೆಂದು ಶಿಕ್ಷಕರು ತೋರಿಸುತ್ತಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ಗಣಿತ’ ಅನ್ನು ನೀವು ಓದಬಹುದು.

ಹೆಚ್ಚು ವಿದ್ಯಾರ್ಥಿಗಳಿರುವ ತಮ್ಮ ದೊಡ್ಡದಾದ ತರಗತಿಯಲ್ಲಿ ವಿವಿಧ ರೀತಿಯ ಅನೌಪಚಾರಿಕ ಮೌಲ್ಯಮಾಪನವನ್ನು ಶಿಕ್ಷಕರು ಪ್ರಯತ್ನಿಸುತ್ತಾರೆ.

Interactive feature not available in single page view (see it in standard view).

ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ಮೌಲ್ಯಮಾಪನದ ಒಂದು ಸರಳ ಕ್ರಮವನ್ನು ಬಳಸಿಕೊಂಡು,ಇದರಿಂದ ಕಂಡುಕೊಂಡ ಫಲಿತಾಂಶದಿಂದ ತಮ್ಮ ಪಾಠ ಯೋಜನೆಯನ್ನು ಸೂಕ್ತವಾಗಿ ಬದಲಿಸಿಕೊಂಡಿದ್ದಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ’ ಮಾಧ್ಯಮಿಕ ಗಣಿತ’ ಅನ್ನು ನೀವು ಓದಬಹುದು.

ವಿದ್ಯಾರ್ಥಿಗಳನ್ನು ಗುಂಪುಗಳನ್ನಾಗಿ ಆಯೋಜಿಸಲು , ಅವರುಗಳ ಬಗ್ಗೆ ತಮಗಿದ್ದ ಈ ಹಿಂದಿನ ತಿಳುವಳಿಕೆಯನ್ನು ಶಿಕ್ಷಕರು ಬಳಸಿಕೊಂಡರು.

Interactive feature not available in single page view (see it in standard view).

ಸ್ಥಳೀಯ ಸಂಪನ್ಮೂಲಗಳನ್ನು ಬಳಸುವುದು

ವಿವಿಧ ವಿಷಯಗಳ ಪಾಠಗಳಲ್ಲಿ ಶಿಕ್ಷಕರು ಸ್ಥಳೀಯ ಸಂಪನ್ನ್ಮೂಲಗಳನ್ನು ಸ್ರುಜನಾತ್ಮಕವಾಗಿ ಹೇಗೆ ಬಳಸಿಕೊಳ್ಳುತ್ತಾರೆಂಬುದರ ಬಗ್ಗೆ ಉದಾಹರಣೆಗಳನ್ನು ಈ ವಿಡೀಯೊದಲ್ಲಿ ತೋರಿಸಲಾಗಿದೆ. ಸ್ಥಳೀಯ ಸಂಪನ್ಮೂಲಗಳು ಚಟುವಟಿಕೆಗಳಲ್ಲಿ ಒಂದು ಪ್ರಾಮಾಣಿಕತೆಯನ್ನು ತಂದು ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಪರಿಚಿತವಾಗಿಯೂ ಅರ್ಥಪೂರ್ಣವಾಗಿಯೂ ಮಾಡುತ್ತದೆ. ಈ ಸಂಪನ್ಮೂಲಗಳು ತಮಗೆ ಅರ್ಥವಾಗುವ ರೀತಿಯಲ್ಲಿ ವಿದ್ಯಾರ್ಥಿಗಳು ವಸ್ತುಗಳಿಂದ ( ಹಣ್ಣಿನ ಭಾಗದ ತರಹ) ಚಿಹ್ನೆಗಳತ್ತ (ಕೂಡುವುದು ಮತ್ತು ಭಿನ್ನರಾಶಿ) ಅತ್ತ ಸಾಗಲು ನೆರವಾಗುತ್ತದೆ. ಸಂಪನ್ಮೂಲಗಳನ್ನು ಸೃಜನಾತ್ಮಕವಾಗಿ ಬಳಸುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆ ಚಟುವಟಿಕೆಗಳನ್ನು ಹೆಚ್ಚು ಪ್ರೇರಕವಾಗಿಸುತ್ತದೆ.

ಮುಖ್ಯ ಸಂಪನ್ಮೂಲ ‘ಸ್ಥಳೀಯ ಸಂಪನ್ಮೂಲಗಳನ್ನು ಬಳಸುವುದು’ ಅನ್ನು ಓದಬಹುದು.

ಚಟುವಟಿಕೆಗಳನ್ನು ಹೆಚ್ಚು ಅರ್ಥಪೂರ್ಣವಾಗಿಸಲು ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಆಚೆಕಡೆ ಕರೆದುಕೊಂಡು ಹೋಗಿದ್ದಾರೆ.

Interactive feature not available in single page view (see it in standard view).

ಶಿಕ್ಷಕರು ತಮ್ಮ ಪಾಠದಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಅನುಭವನ್ನು ಅಳವಡಿಸಿಕೊಳ್ಳುತ್ತಾರೆ.

Interactive feature not available in single page view (see it in standard view).

ತಮ್ಮ ಇಂಗ್ಲೀಷ್ ಪಾಠವನ್ನು ಉತ್ತಮಗೊಳಿಸಲು ಶಿಕ್ಷಕರು ಸಹಜವಾದ ಸಂಪನ್ಮೂಲಗಳನ್ನು ಸೃಜನಾತ್ಮಕವಾಗಿ ಬಳಸುತ್ತಾರೆ.

Interactive feature not available in single page view (see it in standard view).

ಪಠ್ಯಪುಸ್ತಕಕ್ಕೆ ಪೂರಕವಾಗಿ ಶಿಕ್ಷಕರು ತಮ್ಮ ಸಂಪನ್ಮೂಲಗಳನ್ನು ಸೃಜನಾತ್ಮಕವಾಗಿ ಬಳಸುತ್ತಾರೆ

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-Indiaಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ಗಣಿತ’ ಅನ್ನು ನೀವು ಓದಬಹುದು.

ತಮ್ಮ ವಿದ್ಯಾರ್ಥಿಗಳ ಕಲಿಕೆಯನ್ನು ಹೆಚ್ಚಿಸಲು ಶಿಕ್ಷಕರು ಶಾಲೆಯ ವಾತಾವರಣವನ್ನು ಬಳಸಿಕೊಳ್ಳುತ್ತಾರೆ

Interactive feature not available in single page view (see it in standard view).

ಪಾಠದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಶಿಕ್ಷಕರು ಸ್ಥಳೀಯ ಮತ್ತು ಕೈಯಲ್ಲಿ ತಯಾರಿಸಿದ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಾರೆ.

Interactive feature not available in single page view (see it in standard view).

ಕಥೆ ಹೇಳುವಿಕೆ, ಹಾಡುಗಳು, ಪಾತ್ರಾಭಿನಯ ಮತ್ತು ನಾಟಕ

ತಮ್ಮ ಪರಿಕಲ್ಪನೆಗಳನ್ನು ಬೆಳೆಸಲು ಮತ್ತು ಪರಸ್ಪರ ಜ್ನಾನವನ್ನು ಹಂಚಿಕೊಳ್ಳಲು ವಿವಿಧ ಚಟುವಟಿಕೆಗಳಲ್ಲಿ ವಿವಿಧ ಪಠ್ಯಕ್ರಮಗಳಲ್ಲಿ ಕಥೆ ಹೇಳುವಿಕೆ, ಹಾಡುಗಳು, ಪಾತ್ರಾಭಿನಯ ಮತ್ತು ನಾಟಕ ಗಾಳನ್ನು ಶಿಕ್ಷಕರು ಹೇಗೆ ಬಳಾಸಿಕೊಳ್ಳುತ್ತಾರೆಂದು ಈ ವಿಡೀಯೊಗಳು ತೋರಿಸುತ್ತವೆ.

ಮುಖ್ಯ ಸಂಪನ್ಮೂಲ ’ಕಥೆ ಹೇಳುವಿಕೆ, ಹಾಡುಗಳು, ಪಾತ್ರಾಭಿನಯ ಮತ್ತು ನಾಟಕ’ ಅನ್ನು ನೀವು ಓದಬಹುದು.

ತಮ್ಮ ವಿದ್ಯಾರ್ಥಿಗಳು ಇಂಗ್ಲೀಷಿನ ಹೊಸ ಪದಗಳನ್ನು ಕಲಿಯಲು ನೆರವಾಗುವಂತೆ ಒಂದು ಅಂತರಕ್ರಿಯಾತ್ಮಕ ಸೆಷನ್ ನಲ್ಲಿ ಶಿಕ್ಷಕರು ಪರಿಚಯವಿರುವ ಕಥೆಯನ್ನು ಬಳಸುತ್ತಾರೆ.

Interactive feature not available in single page view (see it in standard view).

ಒಂದು ಪರಿಚಿತವಾದ ಕಥೆಯನ್ನು ವಿದ್ಯಾರ್ಥಿಗಳಿಗೆ ಪುನಃ ಹೇಳಲು ಶಿಕ್ಷಕರು ಪ್ರಾಪ್ ಗಳನ್ನು ಬಳಸುತ್ತಾರೆ

Interactive feature not available in single page view (see it in standard view).

ಸಂಖ್ಯ ಕೆಲಸದಲ್ಲಿ ವಿದ್ಯಾರ್ಥಿಗಳು ತಮ್ಮನ್ನ್ನು ತೊಡಗಿಸಿಕೊಳ್ಳಲು ಕಥೆಯನ್ನು ಹೇಗೆ ಬಳಸಿಕೊಳ್ಳಬಹುದೆಂದು ಶಿಕ್ಷಕರು ನಿರೂಪಿಸುತ್ತಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ’ ಪ್ರಾಥಮಿಕ ಗಣಿತ’ ಅನ್ನು ನೀವು ಓದಬಹುದು.

ವೈಜ್ನಾನಿಕ ಪರಿಕಲ್ಪನೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಮುಟ್ಟಿಸಲು ಶಿಕ್ಷಕರು ಕಥೆ ಹೇಳುವುದನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳುತ್ತಾರೆ.

Interactive feature not available in single page view (see it in standard view).

ಪಾಠ ಮಾಡುವ ಮುನ್ನ ಕಥೆ ಹೇಳುವುದನ್ನು ಸಿದ್ದಪಡಿಸುವುದು ಹಾಗು ಅಭ್ಯಾಸ ಮಾಡುವುದರ ಲಾಭಗಳನ್ನ್ನು ಶಿಕ್ಷಕರು ತೋರಿಸುತ್ತಾರೆ.

Interactive feature not available in single page view (see it in standard view).

ತಾವು ಕಲಿತಿರುವ ಗಣಿತದ ಪರಿಕಲ್ಪನೆಗಳು ತಮ್ಮ ದಿನನಿತ್ಯದ ಜೀವನದಲ್ಲಿ ಹೇಗೆ ಸಂಬಂಧಿಸುತ್ತವೆ ಎಂದು ತೋರಿಸಲು ಒಂದು ಪಾತ್ರಾಭಿನಯವನ್ನು ಮಾಡಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳುತ್ತಾರೆ.

Interactive feature not available in single page view (see it in standard view).
  • ವಿಡೀಯೊ/ಟ್ರಾನ್ಸ್ ಕ್ರಿಪ್ಟ್ ಅನ್ನು ಡೌನ್ ಲೋಡ್ ಮಾಡಿ
  • ಈ ವಿಡೀಯೊದ ಬಗ್ಗೆ ನಿಮ್ಮ ಆಲೋಚನೆಗಳನ್ನು ನಾವು ಸ್ವಾಗತಿಸುತ್ತೇವೆ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು You Tube ನಲ್ಲಿ ಹಂಚಿಕೊಳ್ಳಿ
  • TESS-India ಶಿಕ್ಷಕರ ಅಭಿವೃದ್ಧಿ OER ’ ಮಾಧ್ಯಮಿಕ ಗಣಿತ’ ಅನ್ನು ನೀವು ಓದಬಹುದು.

ಶಾಲೆಯ ನಾಯಕತ್ವ

ಪರಿಚಯ

ಈ ಮುಂದೆ ನೀಡಲಾಗಿರುವ 9 ವಿಡಿಯೋಗಳು ಭಾರತದ ಶಾಲೆಗಳಲ್ಲಿರುವ ನಾಯಕತ್ವದ ಅಂಶಗಳ ಬಗ್ಗೆ ಕೇಂದ್ರೀಕೃತವಾಗಿದೆ. ಈ ವಿಡಿಯೋಗಳಲ್ಲಿ ಭಾರತೀಯ ಶಾಲಾ ನಾಯಕರು, ತಮ್ಮ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ, ಬೋಧನಾ ಮತ್ತು ಕಲಿಕೆಯನ್ನು ಸುಧಾರಿಸಲು, ಬದಲಾವಣೆಯನ್ನು ಹೇಗೆ ಅನುಷ್ಟಾನ ಮಾಡಿದರೆಂಬ ಬಗ್ಗೆ ಮಾತನಾಡಿರುವುದನ್ನು ತೋರಿಸಲಾಗಿದೆ. ನಿಮ್ಮ ಶಾಲೆಗಳಲ್ಲಿಯೂ ಈ ಬಗೆಯ ಅಭ್ಯಾಸಗಳ ಬಳಕೆಯ ಬಗ್ಗೆ ಪರಿಶೋಧಿಸುವಂತೆ ನಿಮ್ಮನ್ನು ಪ್ರೇರೇಪಿಸುವುದು, ಈ ವಿಡಿಯೋಗಳ ಮುಖ್ಯ ಉದ್ದೇಶವಾಗಿದೆ.

ಈ ವಿಡಿಯೋಗಳನ್ನು 9 ವಿಷಯಗಳಿಗೆ ಅನುಗುಣವಾಗಿ ಕ್ರಮಬದ್ಧವಾಗಿ ಸಂಯೋಜಿಸಲಾಗಿದೆ:

ಈ ವಿಡಿಯೋಗಳನ್ನು TESS-India ಶಾಲೆಯ ನಾಯಕತ್ವ ಮು.ಶೈ.ಸಂ (OER) ದ ವಿಷಯಗಳೊಂದಿಗೆ ಸಂಬಂಧೀಕರಿಸಲಾಗಿದೆ.

ಶಾಲಾ ನಾಯಕರೊಡನೆ ಚರ್ಚೆಗಳು ಮತ್ತು ಚಟುವಟಿಕೆಗಳನ್ನು ಕೈಗೊಳ್ಳಲು ಹಾಗು ಹೆಚ್ಚಿನ ವಿವರಿಗಳಿಗೆ ಹಾಗು ಪರಿಕಲ್ಪನೆಗಳಿಗಾಗಿ ಶಾಲೆಯ ನಾಯಕತ್ವ ವಿಡೀಯೊ ಸಂಪನ್ಮೂಲಗಳು ಟಿಪ್ಪಣಿಗಳು ಇಲ್ಲಿ ಲಭ್ಯವಿರುತ್ತದೆ.

ಶಾಲೆ-ಸಮುದಾಯಗಳ ಸಹಭಾಗಿತ್ವದ ಸ್ಥಾಪನೆ

ವಿದ್ಯಾರ್ಥಿಗಳ ಹಾಜರಾತಿಯನ್ನು ಉತ್ತಮಗೊಳಿಸಲು ತಾವು ಅಳವಡಿಸಿರುವ ಬದಲಾವಣೆಗಳ ಬಗ್ಗೆ ಶಾಲಾ ನಾಯಕರು ಮಾತನಾಡುತ್ತಾರೆ. ಇದರಲ್ಲಿರುವ ಸಮಸ್ಯೆಗಳೇನು ಮತ್ತು ಪೋಷಕರೊಡನೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದೂ ಸೇರಿದಂತೆ ,ಅವುಗಳನ್ನು ಹೇಗೆ ಪರಿಹರಿಸಲಾಯಿತೆಂದು ಅವರು ವಿವರಿಸುತ್ತಾರೆ.

Interactive feature not available in single page view (see it in standard view).

ಶಾಲಾ ದಾಖಲಾತಿ ಮತ್ತು ಹಾಜರಾತಿಯ ಮೇಲೆ ನೇರ ಪರಿಣಾಮ ಬೀರುವ ಅಂಶಗಳನ್ನು ಬದಲಿಸಲು, ಮುಖ್ಯ ಜನರ ಸಹಾಯವನ್ನು ಶಾಲಾ ನಾಯಕರು ಕೋರಿದರು. ನಿಮ್ಮ ಶಾಲೆಯಲ್ಲಿ ಸುಧಾರಣೆಯನ್ನು ತರಲು ನಿಮಗೆ ಯಾವ ಜನರ ಸಹಾಯ ಬೇಕಾಗುತ್ತದೆ? ನಿಮ್ಮ ಶಾಲೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳು ಮತ್ತು ಪರಿಹಾರಗಳಲ್ಲಿ ಈ ಜನರನ್ನು ಹೆಚ್ಚು ತೊಡಗಿಸಿಕೊಳ್ಳಲು ಏನು ಮಾಡಬಹುದೆಂದು ಯೋಚಿಸುತ್ತೀರಾ?

ಸಂಬಂಧಿತ TESS-India ಶಾಲೆಯ ನಾಯಕತ್ವ OER

ನಿಮ್ಮ ಶಾಲೆಯ ಬಗ್ಗೆ ಅರಿಯುವುದು

ಶಾಲಾ ನಾಯಕರೊಬ್ಬ್ಬರು ತಮ್ಮ ಶಾಲೆಯ ಸುತ್ತ ಓಡಾಡುತ್ತಾರೆ. ತರಗತಿಯಲ್ಲಿ ಅಳವಡಿಸಿಕೊಳ್ಳಲಾಗುತ್ತಿರುವ ಪರಿಣಾಮಕಾರಿ ಪದ್ದತಿಗಳನ್ನು ಪ್ರಶಂಸಿಸಲು ಮತ್ತು ಏನಾದರು ಕೊರತೆ ಕಂಡು ಬಂದಲ್ಲಿ ಅದನ್ನು ಸರಿಪಡಿಸಲು ನೆರವಾಗುವಂತೆ, ನಾಯಕರು ತರಗತಿಗಳನ್ನು ಗಮನಿಸಿ ಟಿಪ್ಪಣ್ಣಿಗಳನ್ನು ಮಾಡಿಕೊಳ್ಳುತ್ತಾರೆ. ನಾಯಕರ ಈ ಭೇಟಿ ಅಭ್ಯಾಸವಾಗಿ ಹೋಗುವುದರಿಂದ, ವಿದ್ಯಾರ್ಥಿಗಳು ಹಾಗು ಶಿಕ್ಷಕರು ಭೇಟಿಗೆ ಪ್ರತಿಕ್ರಿಯಿಸುವುದಿಲ್ಲ.

Interactive feature not available in single page view (see it in standard view).

ನಿಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಲ್ಲಿ ನೀವು ನಿಮ್ಮನ್ನುಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ನಿಯಮಿತವಾಗಿ ನೀವು ಶಾಲೆಯ ಸುತ್ತ ಒಮ್ಮೆ ಹೋಗಿ ಬರಲು ಸ್ವಲ್ಪ ಸಮ್ಮಯ ತೆಗೆದುಕೊಂಡರೆ, ಶಾಲೆಯಲ್ಲಿ ಕೆಲಸ ನಡೆಯುವುದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಬಹುದು. ಪಾಠಗಳು ನಡೆಯುವಾಗ, ವಿದ್ಯಾರ್ಥಿಗಳ ಮುಂದೆ ಕುಳಿತು ಅವರ ಅನುಭವವನ್ನು ಎಷ್ಟು ಬ್ಬಾರಿ ನೀವು ಕೇಳುತ್ತೀರಾ? ನಿಮ್ಮ ಶಾಲೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಸಮಗ್ರ ಮಾಹಿತಿಯ ಬಗ್ಗೆ ಪುರಾವೆಯನ್ನು ಇನ್ನು ಹೇಗೆ ಸಂಗ್ರಹಿಸುತ್ತೀರಾ?

ಸಂಬಂಧಿತ TESS-India ಶಾಲೆಯ ನಾಯಕತ್ವ OER

ವಿದ್ಯಾರ್ಥಿಗಳ ಹಿನ್ನಲೆಯ ತಿಳುವಳಿಕೆ

ಗ್ರಾಮದ ಶಾಲೆಯ ಶಿಕ್ಷಕರೊಬ್ಬರು, ಪ್ರತಿಯೊಬ್ಬ ವಿದ್ಯಾರ್ಥಿಯ ಹಿನ್ನಲೆಯನ್ನು ತಿಳಿದಿಕೊಳ್ಳುವುದು ಎಷ್ಟು ಮುಖ್ಯ ಅನ್ನುವುದರ ಬಗ್ಗೆ ಮಾತನಾಡುತ್ತಾರೆ. ವಿದ್ಯಾರ್ಥಿಗಳ ಕಲಿಕೆ ಮತ್ತು ಹಾಜಾರಾತಿಯ ಮೇಲೆ ಅವರ ಹಿನ್ನಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಗುರುತಿಸುವುದು ಮುಖ್ಯವೆಂದು ಇವರು ಹೇಳುತ್ತಾರೆ. ಸುಗ್ಗಿಯ ಸಮಯದಲ್ಲಿ ತಮ್ಮ ವಿದ್ಯಾರ್ಥಿಗಳ ಮೇಲಿರುವ ಬೇಡಿಕೆಗಳನ್ನು ಶಿಕ್ಷಕಿ ಬದಲಾಯಿಸಲು ಆಗದಿದ್ದರೂ, ಈ ಜವಾಬ್ದಾರಿಗಳು ಅವರ ಕಲಿಕೆಯ ಮೇಲೆ ಕನಿಷ್ಟ ಪರಿಣಾಮ ಬೀರುವ ಹಾಗೆ ವಿದ್ಯಾರ್ಥಿಗಳು ಹಾಗು ಅವರ ಪೋಷಕರೊಡನೆ ಸಮಾಲೋಚಿಸಬಹುದು. ಹೀಗೆ ಮಾಡಿ ಈ ಶಿಕ್ಷಕಿ ಶಾಲಾ ಹಾಜಾರತಿಯಲ್ಲಿ ಸುಧಾರಣೆ ತಂದಿದ್ದಾರೆ.

Interactive feature not available in single page view (see it in standard view).

ನಿಮ್ಮ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುವ ಅಂಶಗಳೇನೆಂದು ನಿಮಗೆ ತಿಳಿದಿದೆಯೇ? ಈ ಅಂಶಗಳ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಇದಿದ್ದರೆ, ನೀವು ವಿದ್ಯಾರ್ಥಿಗಳ ಯಾವ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದಿರಿ?

ಸಂಬಧಿತ TESS-India ಶಾಲೆಯ ನಾಯಕತ್ವ OER

ಸಂಬಂಧಿತ TESS-Indiaಮುಖ್ಯ ಸಂಪನ್ಮೂಲಗಳು:

ಓದುವಿಕೆ ಮತ್ತು ಬರಹ

ತಮ್ಮ ಶಾಲೆಯಲ್ಲಿನ ಒಂದು ನಿರ್ಧಿಷ್ಟವಾದ ಸಮಸ್ಯೆಯ ಬಗ್ಗೆ ಶಾಲಾ ನಾಯಕರು ಮಾತನಾಡುತ್ತಾರೆ- ಓದುವಿಕೆ ಮತ್ತು ಬರಹದ ಬೋಧನೆಯಲ್ಲಿ ಅಸಂಮಜಸತೆಯ ಸಮಸ್ಯೆಯನ್ನು ಪರಿಹರಿಸಲು ಇಡೀ ಶಾಲೆಯನ್ನು ಹೇಗೆ ಅವರು ತೊಡಗಿಸಿಕೊಂಡರೆಂಬುದರ ಬಗ್ಗೆ ನಾಯಕರು ಮಾತನಾಡುತ್ತಾರೆ. ಸಂಬಂಧಿತ ಅಂಶಗಳನ್ನು ಗುರುತಿಸಲು ಶಿಕ್ಷಕರನ್ನು ತೊಡಗಿಸಿಕೊಂಡು, ಅದಕ್ಕೆ ಅನುಗುಣವಾಗಿ ಕ್ರಮವನ್ನ್ನು ಹೇಗೆ ತೆಗೆದುಕೊಳ್ಳಲಾಯಿತೆಂದು ಅವರು ಮಾತನಾಡುತ್ತಾರೆ.

Interactive feature not available in single page view (see it in standard view).

ನಿಮ್ಮ ಶಾಲೆಯಲ್ಲಿ ಕಲಿಕೆಯ ಕ್ಷೇತ್ರದ ಕೆಲವು ಅಂಶಗಳಲ್ಲಿ ನಿಶಕ್ತವಾಗಿದೆ ಎಂದು ನಿಮಗೆ ಅನಿಸುತ್ತಿದೆಯಾ? ಇದನ್ನು ಹೇಗೆ ಹೆಚ್ಚಾಗಿ ಪತ್ತೆ ಹಚ್ಚುತ್ತೀರಾ ಹಾಗು ಕ್ರಮಕೈಗೊಳ್ಳಲು ಯಾರ ನೆರವನ್ನು ಪಡೆಯುತ್ತೀರಾ?

ಸಂಬಧಿತ TESS-India ಶಾಲೆಯ ನಾಯಕತ್ವ OER

ಸಂಬಂಧಿತ TESS-Indiaಸಂಪನ್ಮೂಲ:

ಸಂಬಂಧಿತ TESS-Indiaಶಿಕ್ಷಕರ ಅಭಿವ್ರುದ್ಧಿ OER:

ಪೋಷಕರರನ್ನು ಒಳಗೊಳ್ಳುವುದು

ತಮ್ಮ ಮಕ್ಕಳ ಶಿಕ್ಷಣದಲ್ಲಿ ಪೋಷಕರನ್ನು ತೊಡಗಿಸಿಕೊಳ್ಳುವುದರಲ್ಲಿ ಇರುವ ಸವಾಲುಗಳ ಬಗ್ಗೆ ಶಾಲಾ ನಾಯಕರು ಮಾತನಾಡುತ್ತಾರೆ. ಒಮ್ಮೆ ಮಾತುಕತೆ ಸ್ಥಾಪಿತವಾದ ಮೇಲೆ, ವಿದ್ಯಾರ್ಥಿಯ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಂಶಗಳನ್ನು ಪರಿಹರಿಸಲು ಸುಲಭವಾಗುತ್ತದೆ ಎಂದು ಅವರು ಹೇಳುತ್ತಾರೆ.

Interactive feature not available in single page view (see it in standard view).

ವಿದ್ಯಾರ್ಥಿಗಳ ಕಲಿಕೆಯನ್ನು ಬೆಂಬಲಿಸಲು ಶಾಲೆಯಲ್ಲಿ ಪೋಷಕರನ್ನು ತೊಡಗಿಸಿಕೊಳ್ಳುವುದು ಮುಖ್ಯ ಅಂಶವಾಗುತ್ತದೆ. ನಿಮ್ಮ ಶಾಲೆಗೆ ಭೇಟಿ ನೀಡಲು ನಿಮ್ಮ ವಿದ್ಯಾರ್ಥಿಗಳ ಪೋಷಕರೆನ್ನು ಹೇಗೆ ಉತ್ತೇಜಿಸುತ್ತೀರಾ? ತಮ್ಮ ಮಕ್ಕಳ ಕಲಿಕೆಯನ್ನು ಬೆಂಬಿಸಲು ಇನ್ಯಾವ ರೀತಿಯಲ್ಲಿ ಪೋಷಕರನ್ನು ಉತ್ತೇಜಿಸುತ್ತೀರಾ?

ಸಂಬಧಿತ TESS-India ಶಾಲೆಯ ನಾಯಕತ್ವ OER:

ಒಳಗೊಳ್ಳುವಿಕೆ

ದೈಹಿಕ ವಿಕಲತೆ ಇದ್ದ ಒಬ್ಬ ವಿದ್ಯಾರ್ಥಿಗೆ, ಶಾಲೆಯ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಹೇಗೆ ಆತನಿಗೆ ಯಶಸ್ವಿಯಾಗಿ ವಿವಿಧ ರೀತಿಯಲ್ಲಿ ಬೆಂಬಲ ನೀಡಲಾಗುತ್ತದೆ ಎಂಬುದನ್ನು ಶಾಲಾ ನಾಯಕರೊಬ್ಬರು ವಿವರಿಸುತ್ತಾರೆ.

Interactive feature not available in single page view (see it in standard view).

ಶಾಲಯಲ್ಲಿ ಲಭ್ಯವಿರುವ ಅವಕಾಶಗಳು ಮತ್ತು ನಡೆಯುವ ಚಟುವಟಿಕೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವುದನ್ನು ಖಾತ್ರಿ ಪಡಿಸಿಕೊಳ್ಳುವುದರಲ್ಲಿ ಶಾಲಾ ನಾಯಕರ ಪಾತ್ರ ಮುಖ್ಯವಾಗುತ್ತದೆ. ಈ ವಿಡೀಯೊದಲ್ಲಿ ತೋರಿಸಿರುವಂತೆ , ವಿದ್ಯಾರ್ಥಿಗಳು ಕಲಿಕೆಯಿಂದ ಅಥವಾ ಶಾಲೆಯಲ್ಲಿರುವ ಸೌಲಭ್ಯಗಳು ಅಥವಾ ಸಂಪನ್ಮೂಲಗಳಿಂದ ಹೊರಗುಳಿಯಲು ದೈಹಿಕ ವಿಕಲತೆ ಒಂದು ಕಾರಣವಾಗಬಹುದು.

ಆದರೆ ಇನ್ನೂ ಹಲವಾರು ಅಂಶಗಳಿವೆ- ಲಿಂಗ, ಸಾಮಾಜಿಕ ಅಂತಸ್ತು ಅಥವಾ ದೃಷ್ಟಿ ಹೀನತೆ- ಈ ಎಲ್ಲ ಅಂಶಗಳು ಅವರನ್ನು ಇತರರು ನಡೆಸಿಕೊಳ್ಳುವ ರೀತಿಯಲ್ಲಿ ಕೊರತೆ ತರಬಹುದು. ನಿಮ್ಮ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸಂಪೂರ್ಣವಾಗಿ ಭಾಗವಹಿಸಲು ಸಾಧ್ಯವಾಗಿದೆಯಾ? ಅಸಮಾನತೆಯನ್ನು ಕಡಿಮೆಗೊಳಿಸಲು ನೀವು ಏನುಮಾಡಬಹುದು?

ಸಂಬಂಧಿತ TESS-India ಶಾಲೆಯ ನಾಯಕತ್ವ OER

ಸಂಬಂಧಿತ TESS-Indiaಮುಖ್ಯ ಸಂಪನ್ಮೂಲ:

ಕಲಿಕಾ ವಾತಾವರಣ

ಗುಣಮಟ್ಟವನ್ನು ಸುಧಾರಿಸಲು ತಮ್ಮ ಶಾಲೆಯಲ್ಲಿ ಕಲಿಕಾ ವಾತಾವರಣವನ್ನು ಶಾಲಾ ನಾಯಕರು ಯಶಸ್ವಿಯಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಪಾಠಗಳನ್ನು ಗಮನಿಸಿ, ಅವರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಡನೆ ಮಾತನಾಡುತ್ತಾರೆ ಮತ್ತು ಶಾಲೆಯಲ್ಲಿ ಶುಚಿತ್ವ ಹಾಗು ಕಾಲನಿಷ್ಟೆಯ ವಿಷಯಗಳತ್ತ ಗಮನ ಹರಿಸುತ್ತಾರೆ.

Interactive feature not available in single page view (see it in standard view).

ಶಾಲಾ ವಾತಾವರಣ ಕಲಿಕೆಗೆ ಪೂರಕವಾಗಿರುವಂತೆ ನೋಡಿಕೊಳ್ಳುವುದು ಶಾಲಾ ನಾಯಕರ ಪಾತ್ರದ ಒಂದು ಮುಖ್ಯ ಅಂಗ. ಇಲ್ಲಿ ಗಮನಹರಿಸ ಬೇಕಾದ ಮುಖ್ಯ ಅಂಶಗಳೆಂದರೆ ಬೋಧನೆಯ ಗುಣಮಟ್ಟ, ಪಠ್ಯಪುಸ್ತಕಗಳ ಲಭ್ಯತೆ, ವಿದ್ಯಾರ್ಥಿಗಳ ನಡವಳಿಕೆ ಹಾಗು ತೊಳೆಯುವ ಸೌಲಭ್ಯಗಳು. ನಿಮ್ಮ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಕಾ ವಾತಾವರಣವನ್ನು ಸುಧಾರಿಸಲು ಏನು ಮಾಡುತ್ತೀರಿ?

ಸಂಬಂಧಿತ TESS-India ಶಾಲೆಯ ನಾಯಕತ್ವ OER

ಸಂಬಂಧಿತ TESS-Indiaಮುಖ್ಯ ಸಂಪನ್ಮೂಲ:

ಶಿಕ್ಷಕರಿಗೆ ಮಾರ್ಗದರ್ಶನ

ಶಿಕ್ಷಕರಿಗೆ ಮಾರ್ಗದರ್ಶನ ನೀಡಿ ಅವರನ್ನು ಹೇಗೆ ಮುನ್ನಡೆಸುವುದೆಂದು ಶಾಲಾ ನಾಯಕರೊಬ್ಬರು ಹೇಳುವುದನ್ನು ಕೇಳಸಿಕೊಳ್ಳಿ ಹಾಗು ಅವರು ಯಾವುದರತ್ತ ದೃಷ್ಟಿ ಹಾಯುಸುತ್ತಾರೆಂದು ಗಮನಿಸಿ. ಶಾಲಾ ನಾಯಕರ ಆದ್ಯತೆಗಳಲ್ಲಿ ವಿದ್ಯಾರ್ಥಿಗಳ ಅನುಭವ ಎಷ್ಟು ಮುಖ್ಯ ಪಾತ್ರವಹಿಸುತ್ತದೆಂದು ಸಹ ಗಮನಸಿ.

Interactive feature not available in single page view (see it in standard view).

ಈ ಶಾಲಾ ನಾಯಕರು ತಮ್ಮ ಶಿಕ್ಷಕರನ್ನು ಮುನ್ನಡೆಸುವ ಬಗ್ಗೆ ಮಾತನಾಡುವಾಗ, ಅವರ ಮುಖ್ಯ ದೃಷ್ಟಿ ಅವರುಗಳನ್ನು ಸಂಘಟಿಸುವುದಾಗಿದೆ. ಆದರೆ ಅವರು ಶಾಲೆಯಲ್ಲಿ ಒಂದು ಸಹಕಾರಿ ಮನೋಭಾವವನ್ನು ಹೇಗೆ ಬೆಳೆಸುತ್ತಾರೆಂಬುದರ ಬಗ್ಗೆ ಸಹ ಮಾತನಾಡುತ್ತಾರೆ. ನಿಮ್ಮ ಶಿಕ್ಷಕರನ್ನು ಮುನ್ನಡೆಸುವ ಯತ್ನದಲ್ಲಿ ನಿಮ್ಮ ಆದ್ಯತೆಗಳೇನು?

ಸಂಬಂಧಿತ TESS-India ಶಾಲೆಯ ನಾಯಕತ್ವ OER:

ಕಲಿಸುವಿಕೆ ಮತ್ತು ಕಲಿಕೆಗೆ ಮಾರ್ಗದರ್ಶನ

ತಮ್ಮ ವಿದ್ಯಾರ್ಥಿಗಳೊಡನೆ ಭಾಗವಹಿಸುವಿಕೆಯ ನಿಲುವನ್ನು ಬಳಸಲು ತಮ್ಮ ಶಾಲೆಯಲ್ಲಿ ಶಿಕ್ಷಕರನ್ನು ಹೇಗೆ ಸಶಕ್ತಗೊಳಿಸುತ್ತಾರೆ ಎಂಬುದರ ಬಗ್ಗೆ ಶಾಲಾ ನಾಯಕರೊಬ್ಬರು ಮಾತನಾಡುತ್ತಾರೆ. ಒಬ್ಬ ನಾಯಕರಾಗಿ, ಇವರು ಈ ನಿಲುವುಗಳನ್ನು ಸ್ವತಃ ತಾವು ಮಾದರನ್ನಾಗಿಸಿಕೊಳ್ಳುವುದರ ಬಗ್ಗೆ ಎಚ್ಚರವಹಿಸುತ್ತಾರೆ.

Interactive feature not available in single page view (see it in standard view).

ಶಿಕ್ಷಕರು ತಮ್ಮ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಖಚಿತ ಪಡಿಸಿಕೊಳ್ಳಲು ಶಾಲಾ ನಾಯಕರು ಶಿಕ್ಷಕರೊಡನೆ ಹಾಗು ವಿದ್ಯಾರ್ಥಿಗಳೊಡನೆ ಮಾತನಾಡುತ್ತಾರೆ. ಪಠ್ಯಕ್ರಮವನ್ನು ಅನುಸರಿಸಲಾಗುತ್ತ್ತಿದೆ ಎಂದು ಖಾತ್ರಿ ಪಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಆದರೆ ವಿದ್ಯಾರ್ಥಿಗಳ ಕಲಿಕೆಯ ಅನುಭವದ ಬಗ್ಗೆ ಹೇಗೆ ತಿಳಿದಿಕೊಳ್ಳುತ್ತೀರಿ? ನಿಮ್ಮ ಶಾಲೆಯಲ್ಲಿ ಎಲ್ಲಾ ಪಾಠಗಳಲ್ಲೂ ಭಾಗವಹಿಸುವಿಕೆಯ ನಿಲುವನ್ನು ಹೇಗೆ ಉತ್ತೇಜಿಸುತ್ತೀರಿ?

ಸಂಬಂಧಿತ TESS-Indiaಮುಖ್ಯ ಸಂಪನ್ಮೂಲಗಳು: