TESS-India ವಿಡಿಯೋ ಸಂಪನ್ಮೂಲಗಳು

Introduction

TESS-India ವಿಡಿಯೋ ಸಂಪನ್ಮೂಲಗಳಿಗೆ ಸ್ವಾಗತ. ಈ ವಿಡಿಯೋಗಳು ಮುಕ್ತ ಶೈಕ್ಷಣಿಕ ಸಂಪನ್ಮೂಲಗಳಾಗಿ (OER) ಉಚಿತವಾಗಿ ಲಭ್ಯವಿದ್ದು, ಕ್ರಿಯೇಟಿವ್ ಆಟ್ರಿಬ್ಯೂಷನ್ ಶೇರ್ ಅಲೈಕ್ ಲೈಸೆನ್ಸ್ ಅಡಿಯಲ್ಲಿ ಪ್ರಕಟಗೊಂಡಿವೆ. ಶಿಕ್ಷಕರು [Tip: hold Ctrl and click a link to open it in a new tab. (Hide tip)] ಮತ್ತು ಶಾಲಾ ನಾಯಕರಿಗಾಗಿ ಇರುವ TESS-India ಪಠ್ಯ ಪುಸ್ತಕ ಆಧಾರಿತ OER ಗೆ ಪೂರಕವಾಗಿರುವ ಉದ್ದೇಶ ಹೊಂದಿದೆ.

TESS-India ವಿಡಿಯೋಗಳು ಭಾರತದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಚಿತ್ರೀಕರಣಗೊಂಡಿವೆ. ತಮ್ಮ ವಿದ್ಯಾರ್ಥಿಗಳೊಡನೆ ಕಲಿಕೆ ಅಧಾರಿತ ಹಾಗೂ ಹೆಚ್ಚು ಭಾಗವಹಿಸುವಿಕೆಯ ಒಂದು ನಿಲುವನ್ನು ಶಿಕ್ಷಕರು ಅಳವಡಿಸಿಕೊಂಡಿರುವುದನ್ನು ಈ ವಿಡಿಯೋಗಳು ತೋರಿಸುತ್ತವೆ. ಒಂದು ಮಾದರಿ ಪದ್ದತಿಯನ್ನು ಪ್ರದರ್ಶಿಸುವ ಯಾವ ಉದ್ದೇಶವನ್ನೂ ಈ ವಿಡಿಯೋಗಳು ಹೊಂದಿಲ್ಲ. ನಿಮ್ಮ ನಿಮ್ಮ ತರಗತಿಗಳಲ್ಲಿ, ಇಂತಹುದೇ ನಿಲುವುಗಳು ಹಾಗೂ ತಂತ್ರಗಳನ್ನು ಬಳಸಿಕೊಂಡು ಪ್ರಯೋಗ ನಡೆಸಲು ನಿಮ್ಮನ್ನು ಪ್ರೇರಿಪಿಸುವ ಗುರಿಯನ್ನು ವಿಡಿಯೋಗಳು ಹೊಂದಿವೆ.

TESS-India ದ ಬೋಧನಾ ಶಾಸ್ತ್ರದಡಿಯಲ್ಲಿನ ಹತ್ತು ಮುಖ್ಯ ಸಂಪನ್ಮೂಲಗಳ ಸಿದ್ಧಾಂತಗಳ ಪ್ರಕಾರ ಈ ವಿಡಿಯೋಗಳನ್ನು ವಿನ್ಯಾಸಿಸಲಾಗಿದೆ.

ವಿಡಿಯೋಗಳ ಸಂಪೂರ್ಣ ಪಟ್ಟಿ ಪಿಡಿಎಫ್ ಸಾರಾಂಶದಲ್ಲಿ ಲಭ್ಯವಿದೆ.

ಇನ್ನೂ ಒಂದು ಸೆಟ್ ವಿಡಿಯೋಗಳು TESS-India ಶಾಲಾ ನಾಯಕತ್ವ OER ಗೆ ಪೂರಕವಾಗಿದೆ.

Video Resources acknowledgements

ಪಾಠಗಳನ್ನು ಯೋಜಿಸುವುದು