TESS-India ದ ಶಾಲಾ ನಾಯಕತ್ವದ OERಗಳನ್ನು ಶಾಲಾ ನಾಯಕರು ತಮ್ಮ ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆಯನ್ನು ಉತ್ತಮಗೊಳಿಸುವಲ್ಲಿ ತಮ್ಮ ಗ್ರಹಿಕೆ ಮತ್ತು ಕೌಶಲಗಳನ್ನು ಅಭಿವೃದ್ಧಿಗೊಳಿಸಿಕೊಳ್ಳಲು, ಸಹಾಯಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. OER ಪ್ರಾಯೋಗಿಕವಾಗಿದ್ದು, ಶಾಲೆಯಲ್ಲಿ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಇತರರೊಡನೆ ನಡೆಸಬಹುದಾದಂತಹ ಚಟುವಟಿಕೆಗಳನ್ನು ಹೊಂದಿದೆ. ಈ ಚಟುವಟಿಕೆಗಳು ಪರಿಣಾಮಕಾರಿ ಶಾಲೆಗಳ ಬಗ್ಗೆ ನಡೆಸಿದ ಸಂಶೋಧನೆ ಮತ್ತು ಶೈಕ್ಷಣಿಕ ಅಧ್ಯಯನವನ್ನು ಆಧರಿಸಿವೆ.
ಈ ಘಟಕಗಳನ್ನು ಆಧರಿಸಿ ಅಧ್ಯಯನ ಮಾಡಲು ಯಾವುದೇ ನಿರ್ಧಿಷ್ಟ ಕ್ರಮ ಅನುಸರಿಸಬೇಕಾಗಿಲ್ಲವಾದರೂ ಸಹ ಅನುಕೂಲಿಸುವವರಾಗಿ/ಸುಗಮಗಾರರಾಗಿ(enabler) ಪ್ರಾಥಮಿಕ ಶಾಲಾ
ನಾಯಕರು ಅಥವಾ ಅನುಕೂಲಿಸುವವರಾಗಿ/ಸುಗಮಗಾರರಾಗಿ (enabler) ಮಾಧ್ಯಮಿಕ ಶಾಲಾ ನಾಯಕರು ಎಂಬಲ್ಲಿಂದ ಪ್ರಾರಂಭಿಸುವುದು ಸೂಕ್ತ. (ನೀವು ಯಾವ ಮಟ್ಟದ ಶಾಲೆಯ ನಾಯಕರಾಗಿದ್ದೀರಿ ಅದಕ್ಕೆ ಅನುಸಾರವಾಗಿ ಆಯ್ದುಕೊಳ್ಳಿ) ಏಕೆಂದರೆ, ಇದು ಇಡೀ ಕೈಪಿಡಿಗೆ ಒಂದು ನಿರ್ಧಿಷ್ಟ ನಿರ್ದೇಶನ ನೀಡುತ್ತದೆ. ಪ್ರಾಥಮಿಕ (ಅಥವಾ ಮಾಧ್ಯಮಿಕ) ಶಾಲೆಗಳಲ್ಲಿ ಬೋಧನೆ ಮತ್ತು ಕಲಿಕೆಯ ಸುಧಾರಣೆಯನ್ನು ಮುನ್ನಡೆಸುವುದರ ಬಗ್ಗೆಯೂ OER ಲಭ್ಯವಿದೆ. ಇದರಲ್ಲಿ ನಿಮ್ಮ ಶಾಲೆಯಲ್ಲಿ ಶಿಕ್ಷಕ OER ಅನ್ನು ಹೇಗೆ ಪರಿಚಯಿಸುವುದು ಮತ್ತು ಬಳಸುವುದು ಎಂಬುದರ ಬಗ್ಗೆ ಅತ್ಯುತ್ತಮ ಮಾರ್ಗದರ್ಶನವಿದೆ.
ಶಾಲಾ ನಾಯಕತ್ವ OER ಅನ್ನು ಘಟಕಗಳ ’ಕುಟುಂಬ/ವರ್ಗ’ ಗಳಲ್ಲಿ ವಿಂಗಡಿಸಲಾಗಿದೆ.
ಪರಿಚಯ
ನಾಯಕತ್ವದ ಬಗೆಗಿನ
ದೃಷ್ಟಿಕೋನ
ಸ್ವ-ನಿರ್ವಹಣೆ ಮತ್ತು ಸ್ವ-ಅಭಿವೃದ್ಧಿ
ಬೋಧನಾ-ಕಲಿಕಾ ಪ್ರಕ್ರಿಯೆನ್ನು ಪರಿವರ್ತಿಸುವುದು
ಸಹಭಾಗಿತ್ವಗಳ ನಾಯಕತ್ವ
ಶಾಲಾ ನಾಯಕರು ಸ್ವಯಂ ಅಧ್ಯಯನಕ್ಕೆ ಅಥವಾ ಬೋಧಿಸಲ್ಪಟ್ಟ ನಾಯಕತ್ವದ ಕಾರ್ಯಕ್ರಮದ ಭಾಗವಾಗಿ ಇದನ್ನು ಬಳಸಬಹುದು. ಎರಡೂ ಸಂದರ್ಭಗಳಲ್ಲಿ, ವೈಯಕ್ತಿಕ ಕಲಿಕೆ ಡೈರಿಯನ್ನು ಬರೆಯುವುದು ಹಾಗೂ ಚಟುವಟಿಕೆಗಳನ್ನು ಮತ್ತು ಪ್ರಕರಣ ಅಧ್ಯಯನಗಳನ್ನು (ಕೇಸ್ ಸ್ಟಡಿಗಳನ್ನು ) ಇತರರೊಡನೆ ಚರ್ಚಿಸುವುದರಿಂದ ಲಾಭಗಳಿವೆ.
ಈ ಘಟಕಗಳಲ್ಲಿ ಬಳಸಲಾಗಿರುವ ’ಶಾಲಾ ನಾಯಕ’ ಎಂಬ ಶಬ್ದವು ಮುಖ್ಯ ಶಿಕ್ಷಕ ಅಥವಾ ಪ್ರಿನ್ಸಿಪಾಲರು ಮಾತ್ರವಲ್ಲದೇ, ಶಾಲೆಯಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಹೊರಲು ಸಿದ್ದವಿರುವ ಯಾವುದೇ ವ್ಯಕ್ತಿಗೆ ಅನ್ವಯಿಸುತ್ತದೆ (ಉದಾ:ಒಂದು ವರ್ಷಕ್ಕೆ, ಗುಂಪಿಗೆ ಅಥವಾ ವಿಷಯಕ್ಕೆ).
ಭಾರತೀಯ ಶಾಲೆಗಳಲ್ಲಿ ಶಾಲಾ ನಾಯಕತ್ವ ದ ಅಂಶಗಳ ಬಗ್ಗೆ ದೃಷ್ಟಿ ಹರಿಸುವ ವಿಡಿಯೋಗಳು ಸಹ ಇಲ್ಲಿದೆ.